Tuesday 22 November 2011

ಕೋಟುಮಚಗಿ ಗ್ರಾಮದ ಹಜರತ ಜಿಂದಾಶಾವಲಿ ದರ್ಗಾ


ಹಜರತಜಿಂದಾಶಾವಲಿ ದರ್ಗಾ
                                                                     
                                             ಕ್ರಿ.ಶ 16 ನೇ ಶತಮಾನದಲ್ಲಿ ಸೂಫಿ ಸಂತರು ನಿಜಾಮ ಸಂಸ್ಥಾನದಿಂದ ಕೊಪ್ಪಳಕ್ಕೆ ಆಗಮಿಸಿದರು. ಆ ಸಂತರ ಕುಟುಂಬಗಳು ಕೊಪ್ಪಳದಲ್ಲಿ ವಾಸವಾಗಿದ್ದರು. ಈಗಲೂ ಕೂಡ ಕೊಪ್ಪಳದಲ್ಲಿ ದೊಡ್ಡ ಜುಮ್ಮಾ ಮಸೀದಿ ಇದೆ ಮುಲ್ಲಾ ಪಂಗಡಗಳಲ್ಲಿ 4ಮನೆತನಗಳು ಅವುಗಳಲ್ಲಿ ಒಂದು ಮನೆತನ ಕೊಪ್ಪಳ ಸಮೀಪದ ಬಾದರ್ ಬಂಡಿಯಲ್ಲಿ ನೆಲೆಸಿತು ಇನ್ನೊಂದು ಕುಟುಂಬ ಧಾರವಾಡದಲ್ಲಿ ನೆಲೆಸಿದರು ಮತ್ತೊಂದು ಕುಟುಂಬ ಕೋಟುಮಚಗಿ ಗ್ರಾಮದಲ್ಲಿ ನೆಲೆಯೂರಿತು. ಆ ಕುಟುಂಬ ಮನೆತನವು ವೆಂಕಟರಮಣ ಗುಡಿಯ ಹತ್ತಿರ ಘಟ್ಟದವರ ಓಣಿಯಲ್ಲಿ ವಾಸವಾಗಿದ್ದರು. ಆ ಮೇಲೆ ಪ್ಲೇಗ್ ಬೇನೆಯಲ್ಲಿ ಆ ಮನೆತನದ ಹಿರಿಯರು ಸಂಬಂದಿಕರು ತಿರಿಕೊಂಡರು. ಚಕ್ಕ ಮಗುವಾದ ಜೀವನಸಾಬ ಎಂಬ ಬಾಲಕ ಬದುಕಿ ಉಳಿದ ತಂದೆ ತಾಯಿ ಇಲ್ಲದ ಮಗುವನ್ನು ದಾಸಮ್ಮ ಎಂಬ ದಾಸರ ಹೆಣ್ಣು ಮಗಳು ಆ ಮಗುವನ್ನು ಸಾಕಿದಳು. ಆ ಮಗು ಬೆಳದಂತೆಲ್ಲಾ ಬೇರೆ ಬೇರೆ ಮನೆತನಗಳಲ್ಲಿ  ಕೆಲಸ ಮಾಡುವದು, ದನ ಕಾಯುವದು ಮಾಡಿದ. ಉದಾ: ಜೈನ, ಬ್ರಾಹ್ಮಣ, ದೇಸಾಯಿಯವರ ಮನೆಗಳಲ್ಲಿ ದುಡಿಯಲು ಇದ್ದನು. ಕಾಲ ಕ್ರಮೇಣ ವೈರಾಗ್ಯೆ ಉಂಟಾಗಿ ತಪಸ್ಸನ್ನು ಮಾಡಲಿಕ್ಕೆ ಪ್ರಾರಂಭಿಸಿದನು. ಮುಂದಿನ ಊರಿನ ಯಾವುದೇ ಭಾಗದಲ್ಲಿ ಇರದೇ ಇಗಿರುವ ದರಗಾ ಸ್ಥಳದಲ್ಲಿ ಯೋಗಿಯಾಗಿ ಕುಳಿತನು.ತಪಸ್ಸನ್ನು ಮಾಡುತ್ತಾ ಆ ಸ್ಥಳದಲ್ಲಿಯೇ ಮೃತರಾದರು. ಇತನ ಹೆಸರನ್ನು ಜೈನರು, ಬ್ರಾಹ್ಮಣರು  ಜೀವಣ್ಣ, ಜೀವನಗೌಡ  ಎಂದು ತಮ್ಮ ಮಕ್ಕಳಿಗೆ ಹೆಸರಿಟ್ಟರು.ಹಾಗೂ ಇತರೆ ಜನಾಂಗ ಸಹ ಇತನ ಹೆಸರನ್ನು ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ( ಉದಾ: ಜೀವಪ್ಪ, ಜೀವನಸಾಬ ) ಇತನ ಉರುಸು ಪ್ರತಿ ವರ್ಷ ಒಳ್ಳೆಯ ವಜೃಂಭಣೆಯಿಂದ ನಡೆಯುತ್ತದೆ. ಇತನ ಧರ್ಮದಲ್ಲಿ ಸರ್ವ ಸಮ್ಮತವಾದ ಪ್ರೇಮ ಕಂಡು ಬರುತ್ತದೆ. ಹಿಂದೂ ಮುಸ್ಲಿಂರು ಒಂದೇ ಧರ್ಮದವರಂತೆ ನಡೆದು ಕೊಳ್ಳುತ್ತಾರೆ. ದರ್ಗಾ ಮುಂದೆ  ದಾಸಮ್ಮನ ಸಮಾಧಿ ಇರುತ್ತದೆ. ಅದು ಅವಳನ್ನು ತಾಯಿಯಾಗಿ ಸ್ವೀಕರಿಸಿದ ಗುರುತು....
            ************************************************************************

No comments:

Post a Comment