Friday 16 March 2012

ಮಾರ್ಗದರ್ಶನ
ಶ್ರೀಯುತ ಶಿವಪ್ಪ  ಹಡಪದ
            (ನಿವೃತ್ತ ಶಿಕ್ಷಕರು ಕೋಟುಮಚಗಿ)

                                                                              kotumachagi                                                   

                                                   ಸುಮಾರು 16ನೇ ಶತಮಾನದಿಂದ 19 ಶತಮಾನದವರೆಗೂ ಬ್ರಿಟಿಷರ ಕಪಿ ಮುಷ್ಠಿಯಲ್ಲಿದ್ದ  ಅಖಂಡ ಭಾರತ ಸಂಸ್ಕೃತಿ ಮತ್ತು ಸಾಹಿತ್ಯ ಕಲೆ ವಾಸ್ತು ಶಿಲ್ಪಗಳ ತವರು ಮನೆಯಾಗಿತ್ತು. 1857ರಿಂದ ನಡೆದ ಪ್ರಥಮ ಸ್ವತಂತ್ರ ಸಂಗ್ರಾಮದಿಂದ 1947ರ ವರೆಗಿನ ಅವಿರತ ಆಂದೋಲನ ಚಳುವಳಿಗಳಿಂದ ದೇಶಕ್ಕೆ ಸ್ವತಂತ್ರ ತಂದು ಕೊಡುವಲ್ಲಿ ಭಾರತೀಯ ಸ್ವತಂತ್ರ ಹೋರಾಟಗಾರರು ಹಾಗೂ ರಾಜ ಮಹಾರಾಜರುಗಳ ಪಾತ್ರ ಬಹುಮುಖ್ಯವಾದುದು.ಇಂತ ಅರಸು ಮನೆತನಗಳು ತಮ್ಮ ಸಾಮ್ರಾಜ್ಯದಲ್ಲಿ ನಿರ್ಮಿಸಿದ ಸಾಕಷ್ಟು ಐತಿಹಾಸಿಕ ತಾಣಗಳು ಇಂದಿಗೂ ಗತವೈಭದ ಇತಿಹಾಸವನ್ನು ಸಾರಿ ಹೇಳುತ್ತವೆ. ಅಂತಹ ಗತ ವೈಭವವನ್ನು ಸಾರಿ ಹೇಳುವ ಗ್ರಾಮ ಗದಗ ಜಿಲ್ಲೆಯ ಗದಗ ತಾಲೂಕಿನ ಕೋಟುಮಚಗಿ.
                                                               
                            ಕೋಟುಮಚಗಿ ಗ್ರಾಮ ಕ್ರಿ.ಶ 16-17ನೇ ಶತಮಾನದಲ್ಲಿ ಕದಂಬರ ಆಡಳಿತದ ಡಂಬಳ ಸಮ್ಮತಕ್ಕೆ ಸೇರಿತ್ತು. ಅಂದು  ದೇಸಾಯಿಗಳು,ಬ್ರಾಹ್ಮಣರು ಮತ್ತು ದೊಡ್ಡ ಶ್ರೀಮಂತರು ಗ್ರಾಮದ ಆಡಳಿತವನ್ನು  ನೆಡೆಸುತ್ತಿದ್ದರು.  ಗ್ರಾಮದ ಸುರಕ್ಷತೆಗೆ ಸೂತ್ತಲೂ ದೊಡ್ಡ ಕೋಟೆ ಗೋಡೆಯನ್ನು ನಿರ್ಮಿಸಲಾಗಿತ್ತು ಗೋಡೆಯ ಹೋರಭಾಗದಲ್ಲಿ ಅಗಳ್ತ (ತಗ್ಗು) ಗಳನ್ನು ನಿರ್ಮಿಸಲಾಗಿತ್ತು ಈಗಲೂ ಸಹ ಅವುಗಳನ್ನು ಕಾಣಬಹುದು. ಅಗಸಿ ಗ್ರಾಮದ ಪ್ರಮುಖ ಪ್ರವೇಶ ದ್ವಾರವಾಗಿತ್ತು. ಗ್ರಾಮದ ಕಾವಲನ್ನು ಹುಡೇದ ಮನೆತನದವರು ನೋಡಿಕೊಳ್ಳುತ್ತಿದ್ದರು. ಗ್ರಮದ ಹೋರಗೆ ಇರುವ ಗುಡ್ಡದಲ್ಲಿ ತುಪಾಕಿ ಹಾರಿಸಲು ಹುಡೆವು (ತುಪಾಕಿಗೆ ಬಳಸುವ ಮದ್ದನ್ನು ಕಲೆಸುವ ದೋಣಿ) ನಿರ್ಮಿಸಲಾಗಿತ್ತು.
                                  ಆಗ ಅಗಸಿಯ ದ್ವಾರ ಬಾಗಿಲನ್ನು  ಮಧ್ಯರಾತ್ರಿ 12ಗಂಟೆಗೆ ಮುಚ್ಚಲಾಗುತ್ತಿತ್ತು. 12ಗಂಟೆಯ ನಂತರ ಊರಿನಲ್ಲಿ ಯಾರು ಪ್ರವೇಶಿಸುವಂತಿರಲಿಲ್ಲ. ಯಾರಾದರೂ ಊರಿಗೆ ಬಂದರೆ ಅವರು ಸೋಮೇಶ್ವರ ಗುಡಿಯ ಪಕ್ಕದಲ್ಲಿಯ ಕಣಗಿನಹಾಳ ರೋಡಿನಲ್ಲಿ ಶಾಲೆಮಠ ಇತ್ತು ಅಲ್ಲಿ ಅಥಿತಿಗಳು ತಂಗುತಿದ್ದರು. ಶಾಲೆಯಲ್ಲಿ ಧರ್ಮ ಗುರುಗಳು ಇದ್ದರು ಅವರು ರಾತ್ರಿ ಹೊತ್ತು ಊರಿಂದ ಬಂದ ಅಥಿತಿಗಳಿಗೆ ಊಟದ ವ್ಯವಸ್ಥೆ, ಮಲಗುವ ವ್ಯವಸ್ಥೆ ಮಾಡುತಿದ್ದರು. ಯಾರಾದರೂ ಕಳ್ಳ ಕಾಕರು ಬಂದರೆ ಹುಡೇದ ಮನೆತನದವರು ನಗಾರಿ ಬಾರಿಸುತಿದ್ದರು.

No comments:

Post a Comment